ಸತ್ಯವಾಣಿ ಮುತ್ತು (೧೫ ಫೆಬ್ರವರಿ ೧೯೨೩ - ೧೧ ನವೆಂಬರ್ ೧೯೯೯) ಒಬ್ಬ ಭಾರತೀಯ ಮಹಿಳಾ ರಾಜಕಾರಣಿ ಮತ್ತು ತಮಿಳುನಾಡಿನ ಚೆನ್ನೈನ ಪ್ರಭಾವಿ ನಾಯಕಿಯಾಗಿದ್ದರು. ಅವರು ತಮಿಳುನಾಡಿನ ವಿಧಾನಸಭೆಯ ಸದಸ್ಯೆಯಾಗಿದ್ದರು, ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಸಚಿವೆಯಾಗಿದ್ದರು. ಅವರು ದ್ರಾವಿಡ ಮುನ್ನೇತ್ರ ಕಜ಼ಗಂ ಸದಸ್ಯರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ತಮ್ಮದೇ ಆದ ಪಕ್ಷವಾದ ತಜ್ತಪಟ್ಟೋರ್ ಮುನ್ನೇತ್ರ ಕಜ಼ಗಂ ಅನ್ನು ಪ್ರಾರಂಭಿಸಿದ್ದರು. ನಂತರ ಅಣ್ಣಾ ದ್ರಾವಿಡ ಮುನ್ನೇತ್ರ ಕಜ಼ಗಂ ಸೇರಿದ್ದರು. ೧೯೯೦ ರ ದಶಕದ ಅಂತ್ಯದಲ್ಲಿ ಅವರು ಮತ್ತೆ ಡಿಎಂಕೆಗೆ ಸೇರಿದರು. == ವಿಧಾನ ಸಭೆಯ ಸದಸ್ಯೆ == ದ್ರಾವಿಡ ಮುನ್ನೇತ್ರ ಕಜ಼ಗಂ (ಡಿಎಂಕೆ) ೧೯೪೯ ರಲ್ಲಿ ಪ್ರಾರಂಭವಾದಾಗಿನಿಂದ ಅವರು ಅದರ ಸದಸ್ಯರಾಗಿದ್ದರು. ೧೯೫೩ ರಲ್ಲಿ ಕುಲ ಕಲ್ವಿ ತಿಟ್ಟಂ ವಿರುದ್ಧ ಡಿಎಂಕೆಯ ಪ್ರತಿಭಟನೆಯನ್ನು ಮುನ್ನಡೆಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ೧೯೫೯-೫೮ ರ ಅವಧಿಯಲ್ಲಿ ಅವರು ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿದ್ದರು. ಅವರು ಅಣ್ಣೈ (ಲಿ. ತಾಯಿ) ನಿಯತಕಾಲಿಕದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಅವರು ೧೯೫೭ ಮತ್ತು ೧೯೭೭ಮತ್ತು ೧೯೮೪ ರ ನಡುವಿನ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಪೆರಂಬೂರ್ ಮತ್ತು ಉಲುಂದೂರ್‌ಪೇಟೆ ಕ್ಷೇತ್ರಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ೧೯೫೭ ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪೆರಂಬೂರ್ ಕ್ಷೇತ್ರದಿಂದ ಮೂರು ಬಾರಿ ಗೆದ್ದರು. ೧೯೬೭ ಮತ್ತು ೧೯೭೧ ರ ಚುನಾವಣೆಗಳಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಅಭ್ಯರ್ಥಿಯಾಗಿದ್ದರು. ಅವರು ೧೯೬೨ ರ ಚುನಾವಣೆಯಲ್ಲಿ ಪೆರಂಬೂರ್ ಮತ್ತು ೧೯೭೭ ರ ಚುನಾವಣೆಯಲ್ಲಿ ಉಲುಂದೂರುಪೇಟೆ ಕ್ಷೇತ್ರದಿಂದ ಸೋತರು. === ಚುನಾವಣಾ ಇತಿಹಾಸ === == ತಮಿಳುನಾಡು ಸಚಿವರು == ಅವರು ೧೯೬೭ ರಿಂದ ೧೯೬೯ ರವರೆಗೆ ತಮಿಳುನಾಡಿನ ಸಿಎನ್ ಅಣ್ಣಾದೊರೈ ಆಡಳಿತದ ಅವಧಿಯಲ್ಲಿ ಹರಿಜನ ಕಲ್ಯಾಣ ಮತ್ತು ಮಾಹಿತಿ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಮತ್ತೆ ೧೯೭೪ ರವರೆಗೆ ಎಂ. ಕರುಣಾನಿಧಿ ಆಡಳಿತದಲ್ಲಿ ಹರಿಜನ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು. == ತಜ್ತಪಟ್ಟೋರ್ ಮುನ್ನೇತ್ರ ಕಜ಼ಗಂ == ಅವರು ೧೯೭೪ ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ದ್ರಾವಿಡ ಮುನ್ನೇತ್ರ ಕಜ಼ಗಂ ತೊರೆದರು. ಸಿಎನ್ ಅಣ್ಣಾದೊರೈ ಅವರ ಮರಣದ ನಂತರ ಹರಿಜನರನ್ನು ಡಿಎಂಕೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಮತ್ತು ಹೊಸ ನಾಯಕ ಎಂ.ಕರುಣಾನಿಧಿ ಅವರು ಹರಿಜನರ ವಿರುದ್ಧ ಪೂರ್ವಾಗ್ರಹ ಹೊಂದಿದ್ದರು ಎಂದು ಅವರು ಹೇಳಿದ್ದಾರೆ. "ಅಂಬೇಡ್ಕರ್‌ರ ನಂತರ ಹರಿಜನರ ಹಕ್ಕುಗಳಿಗಾಗಿ ಹೊಸ ಪಕ್ಷವನ್ನು ರಚಿಸುವ ಸಮಯ ಬಂದಿದೆ. ಯಾರೂ ಕಡ್ಜಲಗಳನ್ನು ನಿಜವಾದ ಶ್ರದ್ದೆಯಿಂದ ಪರಿಗಣಿಸಿಲ್ಲ.ನಾವು ಹೊಸ ಪಕ್ಷ ಕಟ್ಟಬೇಕು, ವಿರೋಧ ಬೆಂಚಿನಲ್ಲಿ ಕೂರಬೇಕು. ಪರಿಶಿ‍‍‍‍‍‌ಷ್ಟ ಜಾತಿಯ ಹಕ್ಕುಗಳಿಗಾಗಿ ಹೋರಾಡಬೇಕು. ನಾವು ಅವಮಾನ ಮತ್ತು ಶೋ‍‍‍‍‍‍‍‍‍‍‍‍‍‍‍‍‍‍‍‍‍ಷಣೆಯ ಮುಂದುವರಿಕೆಗೆ ಅವಕಾಶ ನೀಡಬಾರದು" ಎಂಬುದು ಅವರ ನಿಲುವಾಗಿತ್ತು. ಅವರು ತಜ್ತಪಟ್ಟೋರ್ ಮುನ್ನೇತ್ರ ಕಜ಼ಗಂ ಅನ್ನು ರಚಿಸಿದ್ದರು. ೧೯೭೭ ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ ಪಕ್ಷವನ್ನು ಅಣ್ಣಾ ದ್ರಾವಿಡ ಮುನ್ನೇತ್ರ ಕಜ಼ಗಂನೊಂದಿಗೆ ಅದನ್ನು ವಿಲೀನಗೊಳಿಸಲಾಯಿತು. == ಕೇಂದ್ರ ಸಚಿವೆ == ಅವರು ೩ ಏಪ್ರಿಲ್ ೧೯೭೮ ರಿಂದ ೨ ಏಪ್ರಿಲ್ ೧೯೮೪ ರವರೆಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪ್ರತಿನಿಧಿಯಾಗಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ೧೯ ಆಗಸ್ಟ್ ೧೯೭೯ ರಿಂದ ೨೩ ಡಿಸೆಂಬರ್ ೧೯೭೯ ರವರೆಗೆ ಚೌಧರಿ ಚರಣ್ ಸಿಂಗ್ ಸಚಿವಾಲಯದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ಎ. ಬಾಲಾ ಪಜಾನೋರ್ ಜೊತೆಗೆ ಅವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಮೊದಲ ಇಬ್ಬರು ಕಾಂಗ್ರೆಸ್ಸೇತರ ದ್ರಾವಿಡ ಪಕ್ಷಗಳಾದ ತಮಿಳುನಾಡಿನ ರಾಜಕಾರಣಿಗಳಾಗಿದ್ದರು. == ಪುಸ್ತಕ == ಸತ್ಯವಾಣಿ ಮುತ್ತು ಅವರು ತಮ್ಮ ಹೋರಾಟಗಳನ್ನು "ಮೈ ಆಜಿಟೇಶನ್ಸ್" ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಇದನ್ನು ಮೊದಲು ೧೯೮೨ ರಲ್ಲಿ ಮದ್ರಾಸ್‌ನಲ್ಲಿ ದಿ ಜಸ್ಟೀಸ್ ಪ್ರೆಸ್ ಬಿಡುಗಡೆ ಮಾಡಿದೆ. == ಉಲ್ಲೇಖಗಳು ==